ನಿನಗೋಸ್ಕರ
ಪ್ರಾಣಾನ ಪಣವಾಗಿಡುವೆ ನಿನಗೋಸ್ಕರ
ನಿನಗೋಸ್ಕರ
ಜೀವಾನ ಮುಡಿಪಾಗಿಡುವೆ ನಿನಗೋಸ್ಕರ
ನಡೆಯೋಕೆ ಪ್ರೀತಿ ಯಂತ್ರ ತಿಳಿಬೇಕು ಅದರ ತಂತ್ರ
ಪ್ರೀತೀಲಿ ಸಾವಿರ ಮಂತ್ರ ತಿಳಿದವನು ಪ್ರೇಮಿ ಮಾತ್ರ
ನಿನಗೋಸ್ಕರ ನಿನಗೋಸ್ಕರ ನಿನಗೋಸ್ಕರ
ನಿನಗೋಸ್ಕರ
ಪ್ರಾಣಾನ ಪಣವಾಗಿಡುವೆ ನಿನಗೋಸ್ಕರ
ನಿನಗೋಸ್ಕರ
ಜೀವಾನ ಮುಡಿಪಾಗಿಡುವೆ ನಿನಗೋಸ್ಕರ
ಓ, ಮನಸುಗಳ ತಿಳಿಯೋದಕ್ಕೆ ಮಿಡಿತಗಳ ಅರಿಯೋದಕ್ಕೆ ವಿಜ್ಞಾನಿ ಆಗಬೇಕಿಲ್ಲ
ಹೇ, ಕನಸುಗಳ ಕಾಣೋದಕ್ಕೆ ನನಸದನು ಮಾಡೋದಕ್ಕೆ ಅಜ್ಞಾನಿ ಪ್ರೇಮಿ ಸಾಕಲ್ಲ
ಪ್ರೇಮಕ್ಕೆ ಸೋತ ಪ್ರೇಮಿಗೆ ಪ್ರೇಮಾನೇ ಋಗ್ವೇದ
ಪ್ರೇಮಿಯ ಸೋಲಿಸೋ ಜೋಡಿಗೆ ಆರಾಮಾ ಈ ವಾದ
ಪ್ರೀತಿಗೆ ಬಗೆ ಬಗೆ ಬಣ್ಣ ಬಳಿಯೋಕೆ ಈ ಥರವನ್ನ
ಪಡೆಯೋಕೆ ಪ್ರೇಮದ ಹೊನ್ನ ಹಾಕ್ತಾರೆ ಹೃದಯಕ್ಕೆ ಕನ್ನ
ನಿನಗೋಸ್ಕರ ನಿನಗೋಸ್ಕರ ನಿನಗೋಸ್ಕರ
ನಿನಗೋಸ್ಕರ ಪ್ರೀತೀನ ಗೆಲ್ಲೋದಕ್ಕೆ ನೂರು ಥರ
ನಿನಗೋಸ್ಕರ ಪ್ರೇಮಿನ ಪಡೆಯೋದಕ್ಕೆ ಇಂದು ಒಂಥರಾ
ಓ, ಸ್ನೇಹನ ಬೆಸೆಯೋದಕ್ಕೆ ಪ್ರೇಮಾನ ಮುರಿಯೋದಕ್ಕೆ ಈ ಆಟ ಎಂಥಾ ತುಂಟಾಟ
ಹೇ ನಂಬಿಕೆಯ ಮೆರೆಸೋದಕ್ಕೆ ನಂಬಿದರೆ ಅಳಿಸೋದಕ್ಕೆ ಈ ಸಂಚು ಎಂಥಾ ಜಂಜಾಟ
ನಿಂತಲ್ಲೇ ಬಲೆಯಾ ಹಣೆಯುವಾ ಆ ಜೇಡನ ಮೋಡಿ
ಸುತ್ತೆಲ್ಲ ಬಲೆಯ ಪ್ರೇಮದಿ ಹೆಣೆದಾಡೋ ಈ ಜೋಡಿ
ಮುಗ್ದತೆಯ ಸೋಗಿನ ಮೇಳ ಮುಗ್ದರಿಗೆ ಇಲ್ಲದೆ ಗಾಳ
ಎಸೆಯುವರು ಮಾತಲೇ ಗಾಳ ತಪ್ಪಿಸಲು ಪ್ರೀತಿಯ ತಾಳ
ನಿನಗೋಸ್ಕರ ನಿನಗೋಸ್ಕರ ನಿನಗೋಸ್ಕರ
ನಿನಗೋಸ್ಕರ ಪ್ರಾಣಾನ ಪಣವಾಗಿಡುವೆ ನಿನಗೋಸ್ಕರ
ನಿನಗೋಸ್ಕರ ಜೀವಾನ ಮುಡಿಪಾಗಿಡುವೆ ನಿನಗೋಸ್ಕರ
ನಡೆಯೋಕೆ ಪ್ರೀತಿ ಯಂತ್ರ ತಿಳಿಬೇಕು ಅದರ ತಂತ್ರ
ಪ್ರೀತೀಲಿ ಸಾವಿರ ಮಂತ್ರ ತಿಳಿದವನು ಪ್ರೇಮಿ ಮಾತ್ರ
ನಿನಗೋಸ್ಕರ ನಿನಗೋಸ್ಕರ ನಿನಗೋಸ್ಕರ





