ಏನು ಹೇಳಲಿ ನಾನು ಹೊಸ ತರ
ಏನೇ ಇದ್ದರೂ ನಿನ್ನ ನಂತರ
ನಾನು ಕಾಯುವ ಪ್ರತಿ ನಿಮಿಷವು
ನೀನೇ ಗೊಂದಲ ನೀನೇ ಉತ್ತರ
ಮೌನದಲ್ಲೆ ಮಾತನಾಡುವ ಮಾಯೆ ನೀನೇ
ನೂರು ಭಾವ ಸೇರಿ ಮೂಡಿದ ಸಾಲು ನೀನೇ
ಕವಿತೆ ಕವಿತೆ ನಿನ್ನ ಅರಿತೆ
ಕವಿತೆ ಕವಿತೆ ನಿನ್ನ ಅರಿತೆ
ಏನು ಹೇಳಲಿ ನಾನು ಹೊಸ ತರ
ಏನೇ ಇದ್ದರೂ ನಿನ್ನ ನಂತರ
ನಗುವುದ ಕಲಿಸೋ ಮಗುವಿನ ಮನಸೇ
ಈ ನವಿರಾದ ಮುನಿಸು ನೀ ನನಗಾಗಿ ಉಳಿಸು
ಕರೆದರೆ ಹೆಸರಾ ಕಳಿಸುವೆ ಉಸಿರಾ
ಇರು ಜೊತೆಯಾಗಿ ಹೀಗೆ ನಾ ಮರೆಯಾಗೋವರೆಗೆ
ಕೊನೆವರೆಗೂ ಕಾಪಾಡು ಇದೇ ರೀತಿ ನನ್ನ
ನೀ ನನಗಾದೆ ಬದುಕೋಕೆ ಹೊಸ ಕಾರಣ
ಕವಿತೆ ಕವಿತೆ ನಿನ್ನ ಅರಿತೆ
ಕವಿತೆ ಕವಿತೆ ನಿನ್ನ ಅರಿತೆ
ಏನು ಹೇಳಲಿ ನಾನು ಹೊಸ ತರ
ಏನೇ ಇದ್ದರೂ ನಿನ್ನ ನಂತರ

